Thursday, November 17, 2016

ಭಕ್ತ ಕನಕದಾಸರ ನೆನೆಯುತ್ತ...

ನಾನು ಹೋದರೆ ಹೋದೆನು...

ಭಕ್ತ ಕನಕದಾಸರು ಬದುಕಿದ್ದು ಭರ್ತಿ ನೂರು ವರ್ಷ (೧೫೦೯-೧೬೦೯). ಬಚ್ಚೇಗೌಡ ಮತ್ತು ಬೀರಮ್ಮ ದಂಪತಿಗಳಿಗೆ ಜನಿಸಿದವರು. ಶ್ರೀ ಪುರಂದರದಾಸರದು ಒಂದು ಹಟ. ಅಳಿಯುವ ಮುನ್ನ ಟಿಪಿಕಲ್ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಶ್ರೀಹರಿಯ ಸುಮಾರು ಐದು ಲಕ್ಷ ಕೀರ್ತನೆಗಳನ್ನು ರಚಿಸಲೇಬೇಕು ಎನ್ನುವುದು. ಅಂತಹ ಪಣ ತೊಟ್ಟವರು ಹೋಗುವ ಮುನ್ನ ಕೇವಲ(?) ನಾಲ್ಕು ಲಕ್ಷ ಎಪ್ಪತೈದು ಸಾವಿರ ಹಾಡುಗಳನ್ನು ರಚಿಸಿ ಬಿಟ್ಟು ಹೋದರು. ಉಳಿದ ಇಪ್ಪತೈದು ಸಾವಿರ ಬಿಡಿ, ನಮ್ಮ ಊಹೆಗೂ ನಿಲುಕದೇ ಸಾಗರೋಪಾದಿಯಲ್ಲಿ ಹಾಡುಗಳು ಬಂದಿದ್ದು ನಮ್ಮ ಜಿಲ್ಲೆ ಅವರೇ ಆದ ಶ್ರೀ ಭಕ್ತ ಕನಕದಾಸರಿಂದ.

ಇಲ್ಲೇ ಇದ್ದವರು ಹೀಗೂ ಮಾಡಿದರೇ..!? ಯೆಸ್. ಕೃಷ್ಣದೇವರಾಯನ ವಿಜಯನಗರ ಸಾಮ್ರಾಜ್ಯ ಮಿಂಚಿದ್ದೇ ನಮ್ಮ ಕನ್ನಡ ದಾಸಕೀರ್ತನೆಗಳಿಂದ.

ಅವರ ಜಯಂತಿಯಂದು ಅವರದೇ ಹಾಡು..

ಈ ಲಿಂಕ್ ಅಲ್ಲಿ..

https://youtu.be/oiOMd1EgmO0

Wednesday, November 16, 2016

ಅದು ಯಾವಾಗ ಮೈಯೊಳಗೆ ಲಗ್ಗೆ ಹಾಕಿತೋ...??

ಓದು...

ಇದೊಂದು ನನ್ನ ಪರಮ ಮಿತ್ರ. ತೀರ ನಾನೇನು ಸಾಹಿತ್ಯದ ಗೀಳು ಅಂಟಿಸಿಕೊಂಡ ಮನುಷ್ಯನಲ್ಲ. ದಿನಪತ್ರಿಕೆಯ ಅಂಕಣಗಳು, ಬೆರಳೆಣಿಕೆ ಅಷ್ಟು ಕಾದಂಬರಿಗಳು ಹಾಗೂ ಇತ್ತಿಚೆಗೆ ಆರಂಭವಾದ ಎಲೆಕ್ಟ್ರಾನಿಕ್ ಮಾಧ್ಯಮದ ಬರಹಗಳನಷ್ಟೇ ಕರಗಿಸಿಕೊಳ್ಳಬಲ್ಲ ಒಬ್ಬ ಪ್ರೋಫೆಸರ್. ಹೈಸ್ಕೂಲು ದಿನಗಳಿಂದಲೇ ಪ್ರಾರಂಭವಾದ ಈ ಚಟ ಮೊದಮೊದಲು ಕೇವಲ ಪತ್ರಿಕೆ ಸುದ್ದಿಯ ಅನ್ವೇಷಣೆಯ ಕಡೆಗೆ ಇತ್ತು. ನಂತರ ಆಗಿದ್ದು ವಿಜಯ ಕರ್ನಾಟಕ ಎಂಬ ಹೆಸರಿನ ಪತ್ರಿಕೆಯ ಕೈ ಚಳಕ. ಅಸಲಿಗೆ ಅಂಕಣದ ಹುಚ್ಚು ಹತ್ತಿಸಿದ್ದೇ ನನಗೆ ಆ ಪತ್ರಿಕೆ. ಅದಕ್ಕೂ ಮುಂಚೆ ಪ್ರಜಾವಾಣಿ ಓದುತ್ತಿದ್ದನಾದರೂ ಅಂಕಣಗಳ ಗೋಜಿಗೆ ಹೋದವನಲ್ಲ. ಶುದ್ಧ ಸುದ್ದಿ ಅಷ್ಟೇ. ನನ್ನ ಪುಣ್ಯ. ಹೋಗಿದ್ದಿದ್ದರೆ ಆ ಸಮಯದಲ್ಲಿ ನ್ಯೂಟ್ರಲ್ ಆಗಿದ್ದ ನನ್ನಲ್ಲಿ ಎಡಪಂಥೀಯ ವಿಚಾರಧಾರೆ ಮೊಳಕೆ ಒಡೆದು ಈ ಹೊತ್ತಿಗಾಗಲೇ ಹೆಮ್ಮರವಾಗುತ್ತಿತ್ತು. ಇರಲಿ. ನಂತರ ಶುರುವಾಯಿತು. ಬೆತ್ತಲೆ ಜಗತ್ತು, ನೂರೆಂಟು ಮಾತು, ಜನಗಳ ಮನ, ಸೂರ್ಯ ಶಿಕಾರಿ,   ಪರಾಗ ಸ್ಪರ್ಶ, ಒಳಸುಳಿ, ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಎಲ್ಲ ಅಂಕಣಗಾರರಿಗೂ ನಾನು ಆಭಾರಿ.

ಪ್ರಚಲಿತ ವಿದ್ಯಮಾನಗಳ ವಿಷಯದಲ್ಲಿ ಆಸಕ್ತಿ ಇತ್ತಾದರೂ ಚರ್ಚೆ ಅಷ್ಟಕಷ್ಟೇ. ಕೇವಲ ಮನುಷ್ಯನ ಸಂಬಂಧಗಳು, ಭಾವನೆ, ಪ್ರೀತಿ ಪ್ರಣಯದ ಸಲ್ಲಾಪಗಳು, ಜೀವನದ ಮೌಲ್ಯಗಳು, ಸಮಾಜದಲ್ಲಿ ನಮ್ಮ ಜವಾಬ್ದಾರಿ, ಇನ್ನೊಬ್ಬರಿಗೆ ತೊಂದರೆ ಆಗದಂತೆ ಬದುಕುವ ಕಲೆ, ನಮ್ಮ ದೇಶ, ಪರಂಪರೆ, ಸಂಸ್ಕೃತಿ, ಧರ್ಮ, ಸ್ವಚ್ಛತೆ, ದಿನ ನಿತ್ಯದ ಕೆಲಸಗಳಲ್ಲಿ ಶಿಸ್ತು, ಒಡಹುಟ್ಟಿದವರೊಡನೆ ಇರುವ ಬಗೆ, ತಂದೆ ತಾಯಿಗಳಿಗೆ ಗೌರವ ಕೊಡುವುದು ಹೇಗೆ ಬರೀ ಇಂತಹ ವಿಷಯಗಳಿಗೆ ಸಂಭದಿಸಿದ ಬರಹಗಳನ್ನು ತುಂಬ ಇಷ್ಟ ಪಡುತ್ತಿದ್ದೆ.

ರವಿ ಬೆಳಗೆರೆ, ವಿಶ್ವೇಶ್ವರ ಭಟ್, ಪ್ರತಾಪ್ ಸಿಂಹ, ಶ್ರೀವತ್ಸ ಜೋಶಿ, ನಾಗತಿಹಳ್ಳಿ ಚಂದ್ರಶೇಖರ್, ಪಿ ತ್ಯಾಗರಾಜ್, ಚೈತನ್ಯ ಹೆಗಡೆ, ಓಶೋನ ಬರಹಗಳನ್ನು ಯಾವತ್ತೂ ಮಿಸ್ ಮಾಡುತ್ತೀರಲಿಲ್ಲ. ಅವರೂ ಅಷ್ಟೇ ನನ್ನ ಓದಿನ ಹಸಿವನ್ನು ತುಂಬಿಸಲೇ ಬರಯುತ್ತಿದ್ದಾರೋ ಅನಿಸುತ್ತಿತ್ತು. ಸುಮಾರು ಎಳೆಂಟು ವರ್ಷಗಳ ಅವಿನಾಭಾವ ಸಂಬಂಧ.

(ಇನ್ನೂ ಇದೆ)

Monday, November 7, 2016

ಪಾಪಗ್ರಸ್ತ ಮಹಾನಗರ - ಹುಬ್ಬಳ್ಳಿ

ಹುಬ್ಬಳ್ಳಿಯೊಂದಿಗೆ ನನ್ನದು ಸುಮಾರು ೨೦ ವರ್ಷಗಳ ಒಡನಾಟ. ಅಮ್ಮನೂ ಓದಿದ್ದು ಬೆಳೆದಿದ್ದು ಅಲ್ಲೇ. ನನ್ನ ಊರಿನಿಂದ ಸುಮಾರು ೧೨೦ ಕಿಮಿ ದೂರ. ಉತ್ತರ ಕರ್ನಾಟಕದಲ್ಲಿ ಬಹು ದೊಡ್ಡ ವಾಣಿಜ್ಯ ನಗರಿ, ಗಂಡು ಮೆಟ್ಟಿದ ನಾಡು ಅಂತೆಲ್ಲ ಕರೆಸಿಕೊಳ್ಳುವ ಆ ಊರಿನಲ್ಲಿ ಅಸಲಿಗೆ ಗಂಡಸರೇ ಇಲ್ಲವೇನೋ ಅನ್ನಿಸುವಷ್ಟು ನಿಸ್ತೇಜ ಜನ. ರಾಜಕೀಯವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಬಹು ದೊಡ್ಡ ಪಕ್ಷಗಳು. ಜನರೂ ಅಷ್ಟೇ ಮತ್ತೇ ಅವರವರನ್ನೇ ಆರಿಸುತ್ತ ಬಂದಿದ್ದಾರೆ. ನಾನು ಮೂಲತಹ ಬಿಜೆಪಿಯ ಕಟ್ಟಾ ಬೆಂಬಲಿಗನಾದರೂ ಹುಬ್ಬಳ್ಳಿ ಬಿಜೆಪಿಯನ್ನು ಕಾಂಗ್ರೆಸಿನಷ್ಟೇ ವೀರೊಧಿಸುತ್ತೇನೆ. ಧೂಳು, ಹಾಳು ಗುಂಡಿಗಳು ಬಿದ್ದ ರಸ್ತೆಗಳು, ಎಲ್ಲೆಲ್ಲೂ ಕೊಳಚೆ ಪ್ರದೇಶಗಳು, ಕಿರಿದಾದ ರಸ್ತೆಗಳು ಅಭಿವೃದ್ದಿ ಎಂಬ ಅಂಶವನ್ನೇ ಮರೆತ ಮಹಾನಗರ ಪಾಲಿಕೆ ಇವು ಆ ಊರಿನ ವಿಶೇಷತೆಗಳು. ಇದ್ದುದರಲ್ಲಿ ಧಾರವಾಡ ಸ್ವಲ್ಪ ಪರವಾಗಿಲ್ಲ. ಕೇವಲ ೨೦ ಕಿಮಿ ಅಂತರವಿದ್ಡರೂ ಧಾರವಾಡದ್ದು ಸ್ವಲ್ಪ ತಂಪಾದ, ಅರೆ ಮಲೆನಾಡು ಹವಾಗುಣ. ಜನರೂ ಅಷ್ಟೇ, ಸ್ವಲ್ಪ ವಿವೇಚನೆ, ನಾಗರಿಕತೆಯನ್ನು ಇನ್ನೂ ಉಳಿಸಿಕೊಂಡಿದ್ದಾರೆ. ೧೯೯೩ ರಲ್ಲಿ ಆಕಸ್ಮಿಕ ಚಿತ್ರದ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಹಾಡು ಚಿತ್ರೀಕರಣ ನಡೆದ ಜಾಗ ಕಿತ್ತೂರು ಚೆನ್ನಮ್ಮ ವೃತ್ತ ಟ್ರಾಫಿಕ್ ಎಂಬ ಬೆಂಕಿಗೆ ಬಿದ್ದು ಎಂದೋ ಉರಿದು ಹೋಗಿದೆ. ಸಾಲದ್ದಕ್ಕೆ ಬಿ ಆರ್ ಟಿ ಎಸ್ ಎಂಬ ಉಪಯೋಗವಿಲ್ಲದ, ದೂರದೃಷ್ಟಿ ಇಲ್ಲದ, ಆರ್ಥಿಕವಾಗಿ ಹೊರೆಯಾದ ಯೋಜನೆ. ಹುಬ್ಬಳ್ಳಿ ಜನರೇನೋ ಅದು ಬೆಂಗಳೂರಿನ ಮೆಟ್ರೊ ಯೋಜನೆಯಂತೆಯೇ ಬಹು ದೊಡ್ಡ ಯೋಜನೆ, ಅದರಿಂದ ನಮ್ಮ ನಗರದ ವಾಹನ ಸಂದಣಿ ಎಲ್ಲ ಕಡಿಮೆ ಆಗೇ ಆಗುತ್ತದೆ ಎಂಬ ಹುಚ್ಚು ಭ್ರಮೆಯಲ್ಲಿದ್ದಾರೆ. ಇಂಜನೀಯರಿಂಗ್ ಅಲ್ಲಿ ಎರಡು ಪದವಿ ಪಡೆದ ನಾನೇ ಇದನ್ನು ಹೇಳಬೇಕು ಅಂತೇನೂ ಇಲ್ಲಾ. ಸರಿಯಾಗಿ ಕಾಳಜಿ ಇರುವ ಯಾವುದೇ ಒಬ್ಬ ಸ್ಥಳಿಯ ನಾಗರೀಕನೂ ಇದನ್ನು ಹೇಳಿಯಾನು. ಕುಡಿಯುವ ನೀರಿನ ಸಮಸ್ಯೆ, ರಸ್ತೆ ಸಮಸ್ಯೆ, ಸರಿಯಾದ ಪಾರ್ಕ್ ಗಳು ಉಹುಂ, ಯಾವದೂ ಸರಿ ಇಲ್ಲಾ. ರಸ್ತೆ ಮಾರ್ಗವಾಗಿ ಒಮ್ಮೆ ಹುಬ್ಬಳ್ಳಿಯ ಬಸ್ ನಿಲ್ದಾಣಕ್ಕೆ ಹೋಗಿ ಬನ್ನಿ, ನಾನು ಹೇಳುವ ಎಲ್ಲ ಸಮಸ್ಯೆಗಳು ನಿಮ್ಮ ಕಣ್ಣಿಗೆ ಕಟ್ಟಿಲ್ಲವಾದರೆ ನನ್ನಾಣೆ. ಭಾರತ ಸರಕಾರ ಸ್ಮಾರ್ಟ್ ಸಿಟಿ ರೂಪಿಸುವ ಮುಂಚೆ ಎಲ್ಲ ನಗರದ ಸ್ಥಳಿಯ ನಾಗರಿಕರಿಗೆ ಆನ್ ಲೈನ್ ಮೂಲಕ ಅಭಿಪ್ರಾಯ ತಿಳಿಸುವಂತೆ, ಸಲಹೆ ಸೂಚನೆ ಕೊಡುವಂತೆ ಕೇಳಿ ಕೊಂಡಿತ್ತು. ಆದರೆ ಜನರು ಸ್ಪಂದಿಸದೆ ಇರುವ ಕಾರಣಕ್ಕೆ ಮೊದಲ ಪಟ್ಟಿ ಬಿಡುಗಡೆ ಆಗಾಗ ಹುಬ್ಬಳ್ಳಿ ಧಾರವಾಡದ ಹೆಸರು ಕೈ ತಪ್ಪಿ ಹೋಗಿತ್ತು. ಇಂತಹ ಮೂಲಭೂತ ಸೌಕರ್ಯಗಳೇ ಇಲ್ಲದ ನಗರಕ್ಕೆ ಯಾವ ಉದ್ಯಮಿ ತಾನೇ ತನ್ನ ಸಾಮ್ರಾಜ್ಯ ಕಟ್ಟಲು ಬರುತ್ತಾನೆ. ಮಾತನಾಡಿಸಲು ಹೋದರೆ, ಅಡಳಿತದಲ್ಲಿ ಇರುವ ಯಾರನ್ನೇ ದೂರುವುದು ಬಿಟ್ಟರೆ ಇಲ್ಲಿಯ ಜನ ಏನೂ ಮಾಡುವುದಿಲ್ಲ. ನನ್ನ ಪ್ರಕಾರ ತಪ್ಪು ಜನರದ್ದೇ. ನಮ್ಮ ಮನೆ, ನಮ್ಮ ಕಾಲನಿ ಅಷ್ಟೇ ಆದರೆ ಸಾಕೇ!? ನಮ್ಮ ನಗರ ಎನ್ನುವ ಕಾಳಜಿಯೂ ಇರಬೇಕಲ್ಲವೇ!!? ಸುಮಾರು ವರ್ಷಗಳ ನಂತರ ಭಾರತ ಸರಕಾರದ ಪರಿಶ್ರಮದಿಂದ ಲಭಿಸಿರುವ ಐ ಐ ಟಿ ಯನ್ನೇ ಬಹು ದೊಡ್ದ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿರುವ ಬಿಜೆಪಿ ಸಂಸದರನ್ನು ಇಲ್ಲಿಯ ಜನ ಭುಜದ ಮೇಲೆ ಹೊತ್ತು ಮೆರವಣಿಗೆ ಮಾಡುತ್ತಿದ್ದಾರೆ. ಕೆ ಎಲ್ ಇ, ಎಸ್ ಡಿ ಎಂ ನಂತಹ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳು ಇದ್ದರೂ ಕಾಳಜಿ ತೋರಿಸುವ ಇರಾದೆ ಯಾರಿಗೂ ಇಲ್ಲ. ಕೇವಲ ತಾವು ಆಯಿತು ತಮ್ಮ ಉದ್ದಿಮೆ ಆಯಿತು ಎನ್ನುವ ಬಾಂಬೆ ಮಾರವಡಿಗಳೂ ಅಷ್ಟೇ. ಇಲ್ಲಿಯ ಜನರೇ ಇಷ್ಟು ಜಿಡ್ಡುಗಟ್ಟಿರುವ ಮನೋಭಾವ ಹೊಂದಿರುವಾಗ ಉತ್ತರ ಭಾರತದ ಆ ಸಮುದಾಯದಿಂದ ಏನನ್ನು ನಿರೀಕ್ಷಿಸಲು ಸಾಧ್ಯ. ನಿತ್ಯವೂ ವಲಸೆ ಬರುವ ಗ್ರಾಮೀಣ ಭಾಗದ ಜನರಿಗೂ ಸ್ವಚ್ಛತೆಯ ಅರಿವು ಇಲ್ಲ. ಸ್ಥಳಿಯರಿಗೂ ಇಲ್ಲ. ಇದೇ ಮನೋಭಾವ ಮುಂದುವರೆದರೆ ಮುಂದಿನ ೨೦ ವರ್ಷಗಳು ಕಳೆದರೂ ಈ ಪಾಪಗ್ರಸ್ತ ನಗರದ ಪರಿಸ್ಥಿತಿ ಇಷ್ಟೇ.

ಇನ್ನಾದರೂ ಜನ ಎಚ್ಚೇತ್ತುಕೊಳ್ಳಲಿ ಎಂಬುದಷ್ಟೇ ಈ ಲೇಖನದ ಆಶಯ.

Saturday, November 5, 2016

Bihar vs Karnataka

Few hours back in weeknd party, we were on side of highway. Police came and asked us, are you guys thinking is this is Bihar?

I wish that the same question should not ask Bihar police in Bihar, are you guys thinking is this is Karnataka!?? 😢