Friday, May 31, 2013
ಕಾಂಗ್ರೆಸ್ ಮಾಡೋ ಒಂದು ಕೆಲ್ಸಕ್ಕಾದ್ರೂ "ಜೈ" ಅನ್ನೋಣ!
.
ಮೇಲೆ ಕೊಟ್ಟಿರೋ ಎಲ್ಲ ಉದಾಹರಣೆಗಳಲ್ಲಿ ಎಲ್ಲೂ ನಾವು "ಗುಟ್ಕಾ" ಉಪಯೋಗ ಮಾಡಲ್ವಲ್ಲಾ, ಅದು ಹೇಗೆ ಅಡಿಕೆ ಬೆಳೆಗಾರರಿಗೆ ನಷ್ಟ ಆಗುತ್ತೆ?!
.
ಕಾಂಗ್ರೆಸ್ ಮಾಡೋ ಒಂದು ಕೆಲ್ಸಕ್ಕಾದ್ರೂ "ಜೈ" ಅನ್ನೋಣ....!!!
Thursday, May 16, 2013
ಹೀಗಿದೆ ನೀವು ಓಟು ಹಾಕಿರುವ ಸರಕಾರ!
ಸಾರಾಯಿಯನ್ನು ಮತ್ತೆ ಜಾರಿಗೆ ತರಲು ಕಾಂಗ್ರೆಸ್ ಸರಕಾರ ಚಿಂತನೆ...!
.
ಏನು ಮಾಡಲು ಹೊರಟಿದ್ದಾರೆ ಈ ಸಿಧ್ಧರಾಮಯ್ಯನವರು?
.
ಬಡವರಿಗೆ ಉತ್ತಮ ಮದ್ಯ ಖರೀದಿಸಲು ಆಗುತ್ತಿಲ್ಲ, ಅದಕ್ಕಾಗಿ, ಅವರ ಶ್ರೇಯೋಭಿವ್ರುಧ್ಧಿಗಾಗಿ ನಾವು ಸಾರಾಯಿಯನ್ನು ಮತ್ತೆ ಜಾರಿಗೆ ತರುತ್ತಿದ್ದೇವೆ...!
ಆದರೆ ಈ ಘೋಷಣೆಗೆ ಸಿಧ್ಧರಾಮಯ್ಯ ಅವರು ಕೊಡುವ ಸಬೂಬೇ ಬೇರೆ. ಉತ್ತಮ ಗುಣದ ಮದ್ಯಕ್ಕೆ ಬೆಲೆ ಜಾಸ್ತಿ, ಬರಿ ಹತ್ತು ರೂಪಾಯಿಯಲ್ಲಿ ಸ್ಥಳೀಯ ಕಳ್ಳರು ತಯಾರಿಸಿದ ಸಾರಾಯಿಯನ್ನು ಕುಡಿದು ತಮ್ಮ ಹಣವನ್ನು ಉಳಿತಾಯ ಮಾಡಿಕೊಳ್ಳಲಿ ಎಂದಿದ್ದಾರೆ..
.
ನೆನೆಪಿರಲಿ ಸ್ನೇಹಿತರೆ... ಕಳೆದ ಅವಧಿಯಲ್ಲಿ ಬಿಜೆಪಿ ಸರಕಾರ ಸಾರಾಯಿಗೆ ನಿಷೇಧ ಹೇರಿತ್ತು, ಅದಕ್ಕೆ ಪೂರಕವೆಂಬಂತೆ "ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್" ಹೆಸರಿನಲ್ಲಿ ಸರಕಾರಿ ಪ್ರಾಯೋಜಿತ ಮದ್ಯದ ಅಂಗಡಿಗಳನ್ನು ತೆರೆದು ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ, ಪರವಾನಿಗೆ ಹೊಂದಿದ ಮದ್ಯಗಳನ್ನು ಮಾರುತ್ತಿತ್ತು...
.
ಅಗ್ಗದ ಬೆಲೆಯ ಸಾರಾಯಿ ಕುಡಿದರೆ ಹಣ ಉಳಿತಾಯವಾಗುತ್ತೋ ಅಥವಾ ಆರೋಗ್ಯ ಹಾಳಾಗುತ್ತೋ ಆ ಕವಿರತ್ನ ಕಾಳಿದಾಸನೇ ಬಲ್ಲ...
.
ಬಿ.ಜೆ.ಪಿ ಸರಕಾರವಿರುವ ದೂರದ ಗುಜರಾತ್ ನಲ್ಲಿ ಮದ್ಯಪಾನವೇ ನಿಷೇಧವಿರುವಾಗ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ಸ್ ಸರಕಾರದ ನಿಷೇದ ಮಾಡಿದರುವುದನ್ನೇಲ್ಲಾ ರದ್ದು ಮಾಡುತ್ತಿದೆ..!
.
ಒಂದು ವೇಳೆ ಸಾರಾಯಿಯನ್ನು ಮತ್ತೇ ಜಾರಿಗೆ ತಂದದ್ದೇ ಆದರೆ ಕರ್ನಾಟಕದ ಎಲ್ಲ ಮಹಿಳ ಮಣಿಗಳ ಆಕ್ರೋಶಕ್ಕೆ ಮಾನ್ಯ ಮುಖ್ಯಮಂತ್ರಿಗಳು ಬಲಿಯಾಗಬೇಕಾಗಬಹುದು...
.
ಇಂದು ಸಾರಾಯಿ ನಿಷೇಧ ರದ್ದು, ನಾಳೆ ಲಾಟರಿ ಉದ್ಯಮ ಮತ್ತೆ ಪುನರಾರಂಭದ ಸೂಚನೆ, ನಾಡಿದ್ದು ಗೋಹತ್ಯೆ ನಿಷೇಧಕ್ಕೆ ತಿದ್ದುಪಡಿ ತರುವುದು, ಮುಂದಿನ ದಿನಗಳಲ್ಲಿ ಮುಕ್ತ ವೈಶ್ಯವಾಟಿಕೆಗೆ ಚಾಲನೆ...
.
ಈ ಎಲ್ಲ ಅದ್ಭುತ ದೃಶ್ಯಾವಳಿಗಳನ್ನು ನಾವು ಬರುವ ಐದು ವರ್ಷಗಳ ಕಾಂಗ್ರೆಸ್ ಅಧಿಕಾರದಲ್ಲಿ ತಪ್ಪದೇ ನೋಡಬಹುದು...
.
ನಾನಂತು ಈ ಸರಕಾರಕ್ಕೆ ನನ್ನ ಓಟು ನೀಡಿಲ್ಲ, ಓಟು ಹಾಕಿದ್ದವರಿಗೆ ಅಪರಾಧ ಮನೋಭಾವ ಕಾಡಿರಲಿಕ್ಕೆ ಸಾಕು..
Thursday, April 18, 2013
ಸಾವು - ಸಾವನ್ನು ಅಳಿಸಿಬಿಡೋದು ಸಾವಲ್ಲ, ನೋವು
ಜನ.
ನೋಡಲಿಕ್ಕೆಂದು ನನ್ನ
ಸತ್ತ ಹೆಣ.
ಕೆಲವರಿಗೆ ಸತ್ತಿರಲಿಕ್ಕಿಲ್ಲ ಎಂಬ ಗುಮಾನಿ
ಹಲವರಿಗೆ ಸಾಯದಿದ್ದರೂ
ಪ್ರಾಣ ಹೋಗಿರಲಿಕ್ಕೆ ಸಾಕು ಎಂಬ
ಖಾತ್ರಿ.
ಸಾಯೋ ವಯಸ್ಸಲ್ಲ
ಇನ್ನು ಸಾಧಿಸೋದಿತ್ತು
ದುರಭ್ಯಾಸಗಳಿದ್ದವು, ಯಾರಿಗಿಲ್ಲ ಬಿಡಿ.
ಕಾಯಿಲೆ ಇತ್ತಂತೆ ಹೌದೇ?
ಮನೆ ಕಡೆ ಚೆನ್ನಾಗಿರಬೇಕಲ್ಲ?
ನಿನ್ನೆ ಬೆಳಗ್ಗೆ ಮಾತಾಡಿದ್ದೆ ಕಣ್ರೀ
ಮನುಷ್ಯ ಹೀಗೇಂತ ಹೇಳಕ್ಕಾಗಲ್ಲ!
ಹೀಗೆ ಆಡಬೇಕಾದ ಮಾತುಗಳನ್ನು ಮಥಿಸಿ
ಕೂಡಿಸಿ ಭಾಗಿಸಿ ಗುಣಿಸಿ
ಅವನ್ನೆಲ್ಲ ನಾಲಗೆ ಕರವಸ್ತ್ರದಲ್ಲಿ ಮಡಿಸಿಟ್ಟುಕೊಂಡು
ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ.
ಸಾಯುವುದು ಇಷ್ಟೆಲ್ಲ ಸಂಭ್ರಮ
ಅಂತ ಗೊತ್ತಿರಲೇ ಇಲ್ಲ.
ಜೀವ ನೀನು ಅಂತ ತಬ್ಬಿ ಪ್ರೇಮಿಸಿದ
ಅವಳು ಕೈ ಕೊಟ್ಟಾಗ ಸತ್ತಿದ್ದೆ.
ನಾನು ಬರೆದ ಕವಿತೆಯನ್ನು
ನಾನೇ ಹರಿಯುತ್ತಾ ಸತ್ತಿದ್ದೆ.
ಬದುಕೋದು ಕಲೀರಿ ಅಂತ
ಸಂಪಾದಕರು ಗದರಿದಾಗ ಸತ್ತಿದ್ದೆ.
ನಿಮಗೆ ತಾತ್ವಿಕ ಬದ್ಧತೆ ಇಲ್ಲ
ಅಂದಾಗೊಮ್ಮೆ ಸತ್ತಿದ್ದೆ.
ಕೆಳಗಿದ್ದವರು ನಕ್ಕಾಗ, ಮೇಲಿದ್ದವರು ಮೊಟಕಿದಾಗ
ನಾನು ಮೇಲೂ ಇಲ್ಲ ಕೆಳಗೂ ಇಲ್ಲ ಎಂದು ಗೊತ್ತಾದಾಗ
ನನ್ನ ಮನೆ ದಾರಿ ಮರೆತಾಗ
ಅವಳ ಮನೆಯಲ್ಲಿ ಚಪ್ಪರ ಎದ್ದಾಗ
ಶ್ರೀರಾಮ ವಾಲಿಯನ್ನು ಮೋಸದಿಂದ ಕೊಂದಿದ್ದು ಗೊತ್ತಾದಾಗ
ಅಶ್ವತ್ಥಾಮ ಹೆಸರಿನ ಆನೆ ಸತ್ತಿದ್ದು
ಅಂತ ಕೃಷ್ಣ ಪಿಸುಗುಟ್ಟಿದಾಗ
ಭಗವದ್ಗೀತೆ ನಿನಗೆ ಕಡ್ಡಾಯ ಎಂದಾಗ
ಪದೇ ಪದೇ ಸತ್ತಿದ್ದೆ.
ಯಾರೂ ಸಂಭ್ರಮಿಸಿರಲಿಲ್ಲ.
ನೆತ್ತಿಯಲ್ಲಿ ಮೊದಲ ಬಿಳಿಕೂದಲು ಕಂಡಾಗ
ಅಕ್ಷರ ಮಸುಕಾದಾಗ
ಕವಿತೆ ಅರ್ಥವಾಗದೇ ಛೇಡಿಸಿದಾಗ
ಕೆನ್ ಯೂ ಸ್ಪೀಕ್ ಇನ್ ಇಂಗ್ಲಿಷ್ ಅಂತ
ಮಂಡ್ಯದ ಮೇಷ್ಟ್ರು ಕೇಳಿದಾಗ
ಸಿನಿಮಾ ಸಲೀಸು ಅಂತ ನಿರ್ದೇಶಕ ನಕ್ಕಾಗ
ವೋಲೆ ಸೋಯಿಂಕಾ? ಯಾರದು?
ಅಂತ ಗೆಳತಿ ಕೇಳಿದಾಗ
ಮತ್ತೆ ಮತ್ತೆ ಸತ್ತಿದ್ದೆ.
ಸಾವು ನಿಗೂಢ.
ನಾವು ಸಾಯುವುದು ಯಾರಿಗೂ ಗೊತ್ತೇ ಆಗುವುದಿಲ್ಲ.
ಅದು ಎಲ್ಲರಿಗೂ ತಿಳಿದಾಗ
ನಮಗೆ ಅರಿವೇ ಆಗುವುದಿಲ್ಲ.
ನಮ್ಮ ಸಾವು ನಮ್ಮದು
ಅವರ ಸಾವು ನಮ್ಮದು
ಎರಡೂ ಒಂದೇ ಆದರೆ
ಅವನು ಮಹಾತ್ಮ
ಕವಿ
ಅಥವಾ
ಮನುಕುಲದ ಶತ್ರು.
Monday, February 25, 2013
ಮಿಡತೆಯ ಕೂಗಿಗೆ ಓಗೊಡುತ್ತಾ!!!
Courtesy Vishveshwar Bhat, Editor of Kannada Prabha - A Kannada dialy in Karnataka:
Sunday, February 3, 2013
ಸುಮ್ಮನೆ ಹೀಗೊಂದು ಯೋಚನೆ...
ಸ್ಯಾಂಡಲ್‌ವುಡ್
ತಮ್ಮ ನಿರ್ಮಾಣ, ನಿರ್ದೇಶನದ 'ವಿಶ್ವರೂಪಂ' ಚಿತ್ರದ ಬಿಡುಗಡೆಗೆ ತಮಿಳುನಾಡಿನಲ್ಲಿ ತೊಂದರೆ ಮಾಡಿದ್ದಕ್ಕೆ ಬೇಸರಗೊಂಡಿರುವ ಕಮಲ್‌ಹಾಸನ್ ರಾಜ್ಯ ಬಿಟ್ಟು ಹೋಗುವ ಮಾತನ್ನಾಡಿದ್ದಾರೆ. ಒಂದುವೇಳೆ ಅದು ಸೀರಿಯಸ್ ಆಗಿ ಕಾರ್ಯಗತವಾಗುತ್ತದೆ ಎಂದಾದರೆ ಕಮಲ್‌ಹಾಸನ್ ಬರುವುದಿದ್ದರೆ, ಬೆಂಗಳೂರಿಗೆ ಬರಲಿ. ಹೇಗಿದ್ದರೂ ಕರ್ನಾಟಕದಲ್ಲಿ ತಮಿಳರ ಸಂಖ್ಯೆ ಹೆಚ್ಚಾಗಿಯೇ ಇರುವುದರಿಂದ ಕಮಲ್‌ಗೆ ಅಲ್ಲಿಗೂ ಇಲ್ಲಿಗೂ ಹೆಚ್ಚಿನ ವ್ಯತ್ಯಾಸವೇನೂ ಕಾಣಿಸಲಾರದು. ಬೆಂಗಳೂರನ್ನು ರಿಟೈರ್ ಆದವರ ಪಾಲಿನ ಸ್ವರ್ಗ ಎನ್ನುತ್ತಾರೆ. ಆದರೆ, ಅದಕ್ಕೊಂದು ಅಪವಾದ ಎನ್ನುವಂತೆ ರಿಟೈರ್ ಆಗುವ ಮುಂಚೆಯೇ ಕಮಲ್ ಬರಲಿ. ಇಲ್ಲಿಯೇ ಇದ್ದುಕೊಂಡು, ಕನ್ನಡ ಸಿನಿಮಾಗಳನ್ನು ಮಾಡಲಿ. ಹೇಗಿದ್ರೂ ನಮ್ಮಲ್ಲಿ ಡಬ್ಬಿಂಗ್‌ಗೆ ಒನ್ ವೇ ಪಾಲಿಸಿ. ಅವುಗಳನ್ನು ತಮಿಳು, ತೆಲುಗಿಗೆ ಡಬ್ ಮಾಡುವುದು ಕಷ್ಟವೇನಲ್ಲ. ಅಲ್ಲದೆ, ಕರ್ನಾಟಕಕ್ಕೆ ಎಷ್ಟೋ ಜನ ತಮಿಳುನಾಡಿಂದ ಇಲ್ಲಿಗೆ ವಲಸೆ ಬಂದಿದ್ದಾರೆ, ಬರುತ್ತಿದ್ದಾರೆ, ಅದರಿಂದ ನಮ್ಮ ಕನ್ನಡಿಗರಿಗೆ ಸಮಸ್ಯೆ ಹೆಚ್ಚುತ್ತಿದೆ ಎಂಬ ಹಳೆಯ ಬೇಸರದ ನಡುವೆ ಕನ್ನಡಿಗರು ಹೆಮ್ಮೆಪಡುವಂಥ ಮತ್ತು ಖುಷಿ ಪಡುವಂಥ ಒಂದೇ ಒಂದು ವಲಸೆಯಾದರೂ ಆಗಲಿ. ಕಮಲ್ ಕರ್ನಾಟಕಕ್ಕೆ ಬರಲಿ.!
Courtesy: Harish (KP)
Friday, February 1, 2013
Nano ಕಥೆಗಳು
ಚಿಕ್ಕವನಿದ್ದಾಗ ಐಸ್‌ಕ್ಯಾಂಡಿ ತಿನ್ನುವ ಆಸೆಯಿಂದಾಗಿ, ಅಪ್ಪನ ಜೇಬಿನಿಂದ ದುಡ್ಡು ಕದಿಯಲು ಹೋಗಿದ್ದೆ. ಅಪ್ಪನ ತೂತು ಜೇಬಿನಿಂದ ನನ್ನ ಕೈ ಈಚೆಗೆ ತೂರಿಬಂತು.
ಕಾಲೇಜು ದಿನಗಳಲ್ಲಿ ಸಿಗರೇಟ್ ಸೇದಬೇಡ ಕ್ಯಾನ್ಸರ್ ಬರುತ್ತದೆಂದು ಸದಾ ಸಲಹೆ ನೀಡುತ್ತಿದ್ದ ಗೆಳೆಯನೇ ಇಂದು, ಬಾರಿನ ಮುಂದೆ ಬೀಡಾ ಅಂಗಡಿ ಇಟ್ಟಿದ್ದಾನೆ!
ಅವಳು ಅವನನ್ನು ಬಿಟ್ಟು ಹೋದಳು. ಅವನು ಬೇರೊಬ್ಬಳನ್ನು ಮದುವೆಯಾಗಿ, ಅವಳಿಗಿಂತಲೂ ಹೆಚ್ಚಾಗಿ ತನ್ನ ಹೆಂಡತಿಯನ್ನು ಪ್ರೀತಿಸಿದ, ಪ್ರೀತಿಯಿಂದ ನೋಡಿಕೊಂಡ ಅವಳ ಕೈ ಹಿಡಿದವನು ಸದಾ ಅವಳನ್ನು ಅನುಮಾನಿಸುತ್ತಿದ್ದ. ಅವಳಿಗೇ ಒಮ್ಮೆ ಅನ್ನಿಸಿತು, ಬಡವನಾದರೂ ಅವನೇ ಪ್ರೀತಿಯಲ್ಲಿ ಶ್ರೀಮಂತ.
ಎದ್ದು ದೇವರ ಮುಖ ನೋಡಿ ದೇವರಿಗೆ ಕೈ ಮುಗಿಯೆಂದು. ಅಮ್ಮ ಕೂಗಿ ಹೇಳಿದ ಧ್ವನಿ ಕಿವಿಗೆ ಬಿದ್ದು, ಹಾಸಿಗೆಯಿಂದೆದ್ದವನ ಕಣ್ಣಿಗೆ ಗೋಡೆಯ ಮೇಲಿನ ಯಾವ ಫೋಟೋದಲ್ಲಿಯೂ ದೇವರು ಕಾಣಲಿಲ್ಲ. ಸೀದಾ ದೇವರ ಕೋಣೆಗೆ ಹೋಗಿ ದೇವರಿಗೆ ಪೂಜೆ ಮಾಡುತ್ತಿದ್ದ ಅಮ್ಮನ ಮುಖ ನೋಡಿ ಕೈ ಮುಗಿದೆ
Saturday, January 26, 2013
ಹರಿ-ಕಥೆ... (Courtesy: Hari Kannada Prabha)
ಒಂದು ದಿನ ಖೇಮು ಆಫೀಸ್ ಕೆಲಸ ಮುಗಿಸಿ ಸಂಜೆ ಮನೆಗೆ ಬಂದ. ಮನೆ ಅಂಗಳದಲ್ಲಿನ ದೃಶ್ಯ ನೋಡಿ ಅವನಿಗೆ ಎದೆ ಒಡೆದುಹೋಗುವಂತಾಯಿತು. ತನ್ನ ಮನೆಯ ನಾಯಿ, ಪಕ್ಕದ ಮನೆಯ ಬೆಕ್ಕನ್ನು ಬಾಯಲ್ಲಿ ಕಚ್ಚಿ ಹಿಡಿದು ಎಳೆದಾಡುತ್ತಿತ್ತು. ಖೇಮು ಓಡಿ ಬಂದವನೇ ತನ್ನ ನಾಯಿಯನ್ನು ಹೊಡೆದು ಬೆಕ್ಕನ್ನು ಬಿಡಿಸಿಕೊಂಡ. ಮುಟ್ಟಿನೋಡಿದರೆ ಬೆಕ್ಕು ಸತ್ತು ಹೋಗಿತ್ತು. ಖೇಮುಗೆ ಗಾಬರಿ. ಮೊದಲೇ ಪಕ್ಕದ ಮನೆಯವನು ಜಗಳಗಂಟ. ಅಲ್ಲದೆ ರಿಟೈರ್ಡ್ ಮಿಲಿಟರಿ ಮ್ಯಾನ್ ಬೇರೆ. 24 ಗಂಟೆ ಕೈಯಲ್ಲಿ ಬಂದೂಕು ಹಿಡಕೊಂಡು ಮಾತಾಡಿದ್ರೆ 'ಸುಟ್ಟುಬಿಡ್ತೀನಿ' ಅಂತಿರ್ತಾನೆ. ನನ್ನ ನಾಯಿ ಅವನ ಬೆಕ್ಕನ್ನು ಸಾಯಿಸಿದೆ ಎಂದು ಗೊತ್ತಾದರೆ ನನ್ನನ್ನೂ ಸಾಯಿಸಿಬಿಡುತ್ತಾನೆ ಎಂದು ಕಂಗಾಲಾದ. ನಂತರ ಕೊಂಚ ಯೋಚಿಸಿ ಆ ಸತ್ತ ಬೆಕ್ಕಿನ ಮರಿಯನ್ನು ತೆಗೆದುಕೊಂಡು ಬಾತ್‌ರೂಮಿಗೆ ಹೋಗಿ ಅದನ್ನು ಚೆನ್ನಾಗಿ ತೊಳೆದು, ಮೈಮೇಲಿನ ಮಣ್ಣು ಧೂಳು ಕ್ಲೀನ್ ಮಾಡಿ ಕತ್ತಲಾಗುವವರೆಗೂ ಕಾದು ಮೆಲ್ಲನೆ ತೆಗೆದುಕೊಂಡು ಹೋಗಿ ಅದನ್ನು ಪಕ್ಕದಮನೆಯ ಅಂಗಳದಲ್ಲಿದ್ದ ಆ ಬೆಕ್ಕಿನ ಗೂಡಿನ ಒಳಗೆ ಇಟ್ಟು ಬಂದುಬಿಟ್ಟ. ಮಿಲಿಟರಿ ಮ್ಯಾನ್ ನೋಡಿದರೆ ಬೆಕ್ಕು ತನ್ನ ಗೂಡಿನಲ್ಲೇ ಸತ್ತುಹೋಗಿದೆ ಎಂದುಕೊಳ್ಳುತ್ತಾನೆ ಎಂಬ ಪ್ಲ್ಯಾನ್ ಖೇಮುನದ್ದು. ಸರಿ ಬೆಳಗ್ಗೆ ಕಾತರದಿಂದ ಬೆಳಗ್ಗೆ ಕಾತರದಿಂದ ಸ್ವಲ್ಪ ಮುಂಚೆಯೇ ಎದ್ದು ಬಂದು ಬಾಲ್ಕನಿಯಲ್ಲಿ ನಿಂತು ಆಚೀಚೆ ನೋಡಿದ ಖೇಮು. ಅದೇ ಸಮಯಕ್ಕೆ ಹೊರಗೆ ಬಂದ ಮಿಲಿಟರಿ ಮ್ಯಾನ್ ಕೇಳಿದ 'ಖೇಮು, ನಿಂಗೊಂದ್ ವಿಷ್ಯ ಗೊತ್ತಾಯ್ತಾ, ನಮ್ಮ ಬೆಕ್ಕಿನ ಮರಿ ಸತ್ತು ಹೋಯ್ತು'. ಖೇಮುಗೆ ನಾಲಗೆ ಒಣಗಿತು. ಹಾ, ಓ...ಛೆ..., ಹೌದಾ? ಎಂದು ತಡವರಿಸಿದ. ಅದಕ್ಕೆ ಮಿಲಿಟರಿ ಮ್ಯಾನ್ ಹೇಳಿದ 'ಹೌದು, ಬೆಕ್ಕಿಗೆ ಜ್ವರ ಬಂದು ಮೊನ್ನೆ ರಾತ್ರಿ ಸತ್ತುಹೋಯ್ತು, ಆದ್ರೆ ವಿಚಿತ್ರ ಅಂದ್ರೆ, ಅದನ್ನ ಮನೆ ಪಕ್ಕದ ಗುಂಡೀಲಿ ಹೂತು ಹಾಕಿದ್ದೆ. ಆದ್ರೆ ಯಾವನೋ ತಲೆಕೆಟ್ಟೋನು, ಅದನ್ನ ಗುಂಡಿಯಿಂದ ತೆಗೆದು, ಅದಕ್ಕೆ ಸ್ನಾನ ಮಾಡಿಸಿ, ಮೈ ಒರೆಸಿ ಮತ್ತೆ ವಾಪಸ್ ತಗೊಂಡ್‌ಬಂದು ಅದರ ಗೂಡಲ್ಲೇ ಇಟ್ಟು ಹೋಗಿದ್ದಾನೆ....!