ನಿನ್ನೆ ಹಾವೇರಿಯಲ್ಲಿ ನಡೆದ ಕರ್ನಾಟಕ ಜನತಾ ಪಕ್ಷದ ಭರ್ಜರಿ ಉದ್ಘಾಟನೆಯಿಂದ ನಮಗೆನಾದ್ರೂ ಲಾಭ ಇದೆಯಾ..?
ನನಗಂತೂ ಹಾಗೇನೂ ಅನಿಸ್ತಿಲ್ಲ. ಟಿವಿ ಹಾಗೂ ಪತ್ರಿಕೆಗಳ ಮೂಲಕ ತಿಳಿದ ವಿಚಾರ ಅಂದ್ರೆ, ಸಮಾವೇಶಕ್ಕೆ ಖರ್ಚಾಗಿದ್ದು ಬರೋಬ್ಬರಿ ಎಳುವರೆ ಕೋಟಿ ರೂಪಾಯಿ ಸಮಾವೇಶಕ್ಕೆ ೫೦೦೦ ಸರಕಾರಿ ಬಸ್ಸುಗಳು, ೧೦೦೦೦ ಸಾವಿರ ಖಾಸಗಿ ಬಸ್ಸುಗಳು, ಒಂದುವರೆ ಲಕ್ಷ ಜನರಿಗೆ ಸಾಧಾರಣ ಊಟ, ಹೀಗೇ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಪ್ರತಿವರ್ಷ ಇಂತಹ ನೂರಾರು ಸಮಾವೇಶಗಳು ಭಾರತಾದ್ಯಂತ ನಡೆಯುತ್ತಲೇ ಇರುತ್ತವೆ. ಆದರೆ, ಸಮಾವೇಶ ನಮ್ಮ ಜಿಲ್ಲೆಯಲ್ಲಿಯೇ ನಡೆದಿದ್ದರಿಂದ ನನಗೆ ಸ್ವಲ್ಪ ಕಸಿವಿಸಿ ಅಗ್ತಾ ಇದೆ. ಒಂದು ವೇಳೆ, ಯಡಿಯೂರಪ್ಪನರು ಮುಖ್ಯಮಂತ್ರಿಯಾದಾಗಿನಿಂದ ಯಾವ ಅಡೆತಡೆ ಇಲ್ಲದೆ ಸಂಪೂರ್ಣವಾಗಿ, ಸೂಸುತ್ರವಾಗಿ ೫ ವರ್ಷ ಆಡಳಿತ ಮಾಡಿದಿದ್ದರೆ, ಇದೆಲ್ಲಾ ಅಗುತ್ತಿತ್ತಾ? ಹೊಸಪಕ್ಷ ಕೂಡ ರಚನೆ ಆಗುತ್ತಿರಲಿಲ್ಲ.
ಅದು ಒಂದು ಕಡೆಯಾದರೆ, ಜನರಲ್ಲಿ "ನಮ್ಮ ನಾಯಕ ಹೊಸ ಪಕ್ಷ ಕಟ್ಟಿದ್ದಾರೆ, ಅದು ಅಧಿಕಾರಕ್ಕೆ ಬಂದರೆ ನಮ್ಮ ರಾಜ್ಯದ ಸರ್ವತೋಮುಖ ಎಳಿಗೆ ಕಾಣುತ್ತದೆ" ಎಂಬ ಆಶಾಭಾವನೆ ಕೂಡ ಜನರಲ್ಲಿಲ್ಲ. ಈ ಹಿಂದೆ ಅಧಿಕಾರ ಸಿಕ್ಕಾಗ ಇವರೇನು ಮಾಡಿದರು ಎಂಬ ಪ್ರಶ್ನೆ ಕೂಡ ಉದ್ಭವವಾಗುತ್ತದೆ. ಸಮಾವೇಶಕ್ಕೆ ಖರ್ಚಾದ ಹಣದ ಮೂಲ ಕೂಡ ಯಾರು ಕೇಳುತ್ತಿಲ್ಲ. ಯಾಕೆಂದರೆ ಜನಕ್ಕೆ ಒಂದು ಪ್ಲೇಟ್ ಪಲಾವ್, ಒಂದು ಮಜ್ಜಿಗೆ ಪಾಕೆಟ್ ಸಿಕ್ಕರೆ ಮುಗಿಯಿತು. ಅವರಿಗೆ ಇನ್ನೇನು ಬೇಡ. ಪ್ರತಿ ತಿಂಗಳು ಐದು ಅಂಕಿಯ ಸಂಬಳ ಪಡೆಯುವ ಸರಕಾರಿ/ಸರಕಾರೇತರ, ಸರಿಯಾಗಿ ತೆರಿಗೆ ಕಟ್ಟುವ ಉದ್ಯೋಗಿಗಳನ್ನು ಕೇಳಿ, ಆ ಹಣ ಎಲ್ಲಿಯದು ಅಂತ.
ಪಕ್ಷ ಅಂತೂ ರಚನೆಯಾಗಿದೆ. ನನಗೆ ಹೈ ಕಮಾಂಡ್ ಸಂಪೂರ್ಣ ಸ್ವಾತಂತ್ರ ಕೊಡಲಿಲ್ಲ ಅನ್ನುವ ಸಬೂಬು ಊಡ ಹೇಳುವ ಹಾಗಿಲ್ಲ. ಅವರ ಹೊಸ ಪಕ್ಷದಲ್ಲಿ ಅವರೇ ಹೈ ಕಮಾಂಡ್, ಇನ್ಮೇಲಾದರೂ ಅಧಿಕಾರಕ್ಕೆ ಬಂದರೇ, ಒಳ್ಳೆ ಆಡಳಿತ ಕೊಡುತ್ತಾರಾ?
ಕಾದು ನೋಡೊಣ...